ಗೊತ್ತುಗುರಿಯಿಲ್ಲದೆಯೆ
ಎತ್ತ
ಸುತ್ತುತಲಿರುವೆ?
ಹತ್ತಾರು
ಬಯಕೆಗಳ ಮನದಿ ಹೊತ್ತು.
ಬತ್ತದಾ
ಗಳಿಕೆಗಳ
ಹೊತ್ತು
ಹೋಗುವೆಯೇನು?
ಸತ್ತ
ಕೂಡಲೆ ಎಲ್ಲ ಪರರ ಸೊತ್ತು.
ಉತ್ತುಬಿತ್ತುವ
ರೈತ
ತುತ್ತ
ನೀಡುವನೆಮಗೆ
ತತ್ತ್ವಗಳ
ಮಥಿಸಿದೊಡೆ ಸಿಗುವುದೇನು!?
ಬಿತ್ತದೆಯೆ
ಬೆಳೆತೆಗೆವ
ಚಿತ್ತಸಂಕಲ್ಪಗಳ
ಸತ್ಯ
ಮಾಡಲು ನಮಗೆ ಸಾಧ್ಯವೇನು?
ಕತ್ತಲೆಯ
ಕರಗಿಸಲು
ನಿತ್ಯವಾಗುವ
ರವಿಯ
ಉತ್ಸವಕೆ
ಭಿನ್ನಮತ ಪ್ರಕೃತಿಗಿದೆಯೇ!?
ಹತ್ತಿರದ
ದಾರಿಯಲಿ
ಸುತ್ತುವನೆ
ಆ ತೇಜ,
ಆತುರದ
ಪರಿಭ್ರಮಣ ಅವನಿಗಿದೆಯೇ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ