ಬುಧವಾರ, ಜುಲೈ 10, 2013

ಸಮದೂರವಿರಬೇಕು ಸುಖದುಃಖಗಳಲಿಹಿತದ ಅನುಭವವಿರಲು ರಭಸದಲಿ ಉಸಿರೆಳೆದು
ಎದಯೊಳಗೆ ತಡೆಹಿಡಿದು ಸುಖಪಡುವೆವು.
ಅಂಬೊಡೆಯ ಪರಿಮಳದ ಹಿತವನ್ನು ಒಳಸೆಳೆದು
ರುಚಿಗಾಗಿ ಕಾತುರವ ತೋರುವಂತೆ.

ದುಃಖದಲಿ ಉಸಿರನ್ನು ರಭಸದಲಿ ಹೊರನೂಕಿ
ಕಷ್ಟವನು ಎದೆಹೊರಗೆ ತಡೆಹಿಡಿವೆವು.
ಸತ್ತಿರಲು ಹೆಗ್ಗಣವು ಸಹಿಸಲಾಗದೆ ನಾತ
ಉಸಿರನ್ನು ಎದೆಹೊರಗೆ ದಬ್ಬುವಂತೆ.

ದುಃಖಗಳ ಹೊರನೂಕಿ ಸುಖಗಳನು ಒಳಸೆಳೆವ
ಯತ್ನಗಳ ಒತ್ತಡದಿ ನಲುಗುತಿರೆ ನಾವು.
ಉಸಿರ ತಾಳಕೆ ಮನವು ಕುಣಿವ ಪರಿಯನು ಅರಿತು
ಸಮದೂರವಿರಬೇಕು ಸುಖಕಷ್ಟಗಳಲಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ