ಶನಿವಾರ, ಜುಲೈ 27, 2013

ಹೊಸಗವಿತೆಯೊಂದು ಬರಲಿ ಎದೆಗೆಕಾದಿರುವೆ ನಾನಿಂದು ಬಾಗಿಲಿನ ಕದತೆರೆದು
ಮಧುರ ಭಾವವು ಬಳುಕಿ ಬಾಗಲೆಂದು.
ಹೃದಯ ಮಿಡಿತದ ಗತಿಗೆ ಕುಣಿಕುಣಿದು ನಲಿದಾಡಿ
ಮುದ್ದಾದ ಪದವೊಂದು ನುಸುಳಲೆಂದು.

ಹಳೆಯ ನೆನಪಿನ ಸುರುಳಿ ಚಿತ್ತದಲಿ ತಾ ಬಿಚ್ಚಿ
ಸುಳಿವು ನೀಡಿದೆ ಒಳಗೆ ಬರುವೆನೆಂದು.
ಮಳೆಯ ಹನಿಗಳು ಸುರಿದು ಇಳೆಯಾಳಕಿಳಿವಂತೆ
ಗಳದೊಳುದುರಿವೆ ಸ್ಮೃತಿಯ ಹನಿಗಳಿಂದು.

ಉಸಿರ ಕಣದಲಿ ಬೆರೆತು ರಸವಾಗಿ ಜಿನುಜಿನುಗಿ
ಸೋಸಿ ನಿಲ್ಲುತ ಸ್ವರವು ಬಾಗಿ ಬರಲಿ.
ಬಸಿರಿನಲಿ ಅಣು ಮೊಳೆತು ತಾ ಜೀವ ತಳೆವಂತೆ
'ಹೊಸಗವಿತೆಕೂಸಾಗಿ ಎದೆಗೆ ಬರಲಿ.

 
http://gulfkannadiga.com/news/culture/99533.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ