ಎಲ್ಲೆಲ್ಲೂ ಅಕ್ಷರ…ಎಲ್ಲೆಲ್ಲೂ ಸುಸ್ವರ….
ಹಕ್ಕಿಗಳ ಕಲರವದಿ ಹೊಸ
ಅಕ್ಷರ.
ಹೂಬನದ ಚೆಲುವಿನಲಿ ಹೊಸ ಸವಿಯ ಜೇನಿನಲಿ
ಹೊಸಜಸದ ಕೃತಿಯೊಳಿದೆ ಹೊಸ
ಅಕ್ಷರ.
ಪ್ರಕೃತಿಯಲಿ ಕಲೆಯಿರಲು
ಮರಮರದಿ ಚಿಗುರಿರಲು
ಬನಬನವು ಬರೆಯುತಿದೆ ಹೊಸ ಅಕ್ಷರ.
ಹಸಿರೆಲೆಯ ತಂಪಿನಲಿ ಕುಕಿಲುಲಿಯ ಇಂಪಿನಲಿ
ಕವಿಹೃದಯ ಗುನುಗುತಿದೆ ಹೊಸ ಅಕ್ಷರ.
ಗಿರಿವನದ ಹೊನಲಿನಲಿ ಜಲಚರದ ನಲಿವಿನಲಿ
ಕುಸುರಿಡುತಲಿ ಹೊಸೆದಿದೆ
ಹೊಸ ಅಕ್ಷರ.
ಇಹಪರದ ಇರವಿನಲಿ ಅನುಭವದ ಅರಿವಿನಲಿ
ಸಮತೆಯೆರೆಯಲೀ ಹೊಸ ಸವಿಯಕ್ಷರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ