ಬುಧವಾರ, ಜುಲೈ 3, 2013

ಹೊಂದಿಸಿ ಬರೆ, ಬಾ ಮನದೊಡತಿ!



ಒಲವಿನ ಕವಿತೆಗೆ ಸುಂದರ ಪದಗಳ  
ಹೊಂದಿಸಿ ಬರೆ, ಬಾ ಮನದೊಡತಿ!
ಬಿಟ್ಟಿಹ ಶಬ್ದವ ಜೋಡಿಸು ಎದೆಯಲಿ
ಹೊಸಮಟ್ಟನು ತಾ ಸಂಗಾತಿ.

ಕಣ್ಣೊಳು ಕೇಳಿಹ ನನ್ನಯ ಪ್ರಶ್ನೆಗೆ
ಒಂದೇ ಪದದಲಿ ಉತ್ತರಿಸು.
ಬಾಳಿನ ಪುಟಗಳ ಅಂದದಿ ತುಂಬಿಸಿ
ದೀರ್ಘ ಪ್ರಬಂಧವ ನೀ ಲಿಖಿಸು.

ಗಾದೆಯ ಮಾತಿನ ವಿಶೇಷ ಸಾರುತ
ನುಡಿಗಟ್ಟುಗಳನು ನೀ ಬಿಡಿಸು.
ಎಡವಿದ ಚರಣ-ಸಂದರ್ಭವ ತಿಳಿಸುತ
ಕಾರಣಸಹಿತಾ ವಿವರಿಸು.

ಕಠಿಣ ಪದಗಳಿಗೆ ಅರ್ಥವ ತಿಳಿಸುತ
ಪಲ್ಲವಿಯೊಂದನು ನೀ ರಚಿಸು.
ಹೊಸಹೊಸ ರಾಗವ ಹೊಸೆದಿಹ ನುಡಿಗಳ
ನನ್ನಯ ಕಿವಿಯಲಿ ಗುನುಗುನಿಸು

2 ಕಾಮೆಂಟ್‌ಗಳು:

  1. ಇವತ್ತು ನಾನೇನೋ ಪುಣ್ಯ ಮಾಡಿದ್ದೇನೆ. ಬಹಳಷ್ಟು ಉತ್ತಮ ರಚನೆಗಳು ಕಣ್ಣಿಗೆ ಸಿಕ್ಕು ಓದಿಸಿಕೊಳ್ಳುತ್ತಿವೆ. ಬಹಳ ಚೆನ್ನಾಗಿದೆ ಸರ್, ಒಮ್ಮೆ ನಮ್ಮ ಮೇಸ್ಟ್ರು ಪಾಠ ಹೇಳಿ ಕೊಟ್ಟ ಹಾಗಾಯ್ತು. ಆದರೆ ನೀವು ಕಟ್ಟಿಕೊಟ್ಟ ಪ್ರೀತಿಪಾಠವೇ ರುಚಿಸಿದ್ದು ಈ ವಯಸ್ಸಿಗೆ ;) ಬಹಳ ಚೆನ್ನಾಗಿದೆ, ರಾಗವಾಗಿ ಗುನುಗಿಕೊಳ್ಳುತ್ತಿದ್ದೆ ಓದುವಾಗ.

    - ಪ್ರಸಾದ್.ಡಿ.ವಿ.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಪ್ರಸಾದ್..

    ಪ್ರತ್ಯುತ್ತರಅಳಿಸಿ