ಗುರುವಾರ, ಅಕ್ಟೋಬರ್ 17, 2013

ಅಂಟಿದ ನಂಟು!



ದಿನದಿನವೂ ಉಜ್ಜಿ ತೊಳೆದು
ಬಸಿದ ರೊಚ್ಚು ಚರಂಡಿ ತುಂಬ.
ಮೂಗೊತ್ತಿ ಉಸಿರ ತಡೆ ಹಿಡಿದು
ನಡೆಯಬೇಕಿದೆ ದಾರಿಹೋಕರು.

ಮತ್ತೆ ಮತ್ತೆ ಅಂಟುವ ಕೊಳೆ,
ತಿಕ್ಕಿ ತೊಳೆದು ಕೊಳೆ ತುಂಬಿ
ರಸ್ತೆಯೆಲ್ಲ ರಾಡಿ.
ತೊಳೆಯದಿರೆ ಒಳಗೊಳಗೆ
ಕೊಳೆವ ಹೂಳು.

ಮನದಾಳದ ಹೂಳೆತ್ತಿ
ಹೊರದಬ್ಬಿ ಶುಚಿಗೊಳಿಸಲೇ
ಒಮ್ಮೆಲೆ!?
ಕೊಳೆಯಾಳವ ಕೆದಕದೆ
ತಿಳಿನಗೆಯ ನಕ್ಕುಬಿಡಲೇ
ಬಿಮ್ಮನೆ!?

ಡಿ.ನಂಜುಂಡ
17/10/2013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ