ಕನ್ನಡವು
ಕುಣಿದಾಡಿ ನಮ್ಮೆದೆಯ ರಂಗದಲಿ
ಕರುನಾಡ
ತಾಯ್ನೆಲದ ಕಲೆಯಾಗಲಿ.
ಕನ್ನಡದ
ಮಾತಿನಲಿ ನಾಲಿಗೆಯು ನಲಿದಾಡಿ
ಹೊಸತನವು
ಉದಯಿಸಲಿ ಕರುನಾಡಲಿ.
ಕನ್ನಡದ
ಸೊಗಡಿರಲು ಸಂಸ್ಕೃತಿಯ ಬೀಡಿನಲಿ
ಕಾದಾಟ
ಇನ್ನೇಕೆ ಗಡಿನಾಡಲಿ?
ಅಡಿಗಡಿಗೆ
ಕವಿತೆಗಳ ಮೆದುವಾದ ನುಡಿಗಳಲಿ
ಕನ್ನಡದ
ಒಗ್ಗಟ್ಟ ಪಡೆಮೂಡಲಿ.
ಹಿತವಾದ
ಜನಪದದ ಹಿನ್ನೆಲೆಯ ಗೀತೆಯಲಿ
ಕರುನಾಡ
ಹೃದಯಗಳು ಕುಣಿದಾಡಲಿ.
ಕನ್ನಡದ
ಸವಿನುಡಿಯ ಸಹಕಾರ-ಸಹಬಾಳ್ವೆ
ಅನುದಿನವು
ಮನೆಮನೆಯ ಮಾತಾಗಲಿ.
ಕನ್ನಡದ
ಇತಿಹಾಸ-ಸಂಸ್ಕೃತಿಯ ನೆಲೆಯಾದ
ಕರುನಾಡ
ಕಾನನವು ಹಸಿರಾಗಲಿ.
ಹಸಿರಿನಾ
ಕಾನನದ ಕಲ್ಪನೆಯು ಕಸುವಾಗಿ
ನವರಸವು
ಕಾವ್ಯದಲಿ ಹೊರಹೊಮ್ಮಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ