ಮೆಣಸು, ಜೀರಿಗೆ, ಮೆಂತ್ಯ,
ಸಾಸಿವೆ
ಧನಿಯಗಳನು ಹುರಿಯಿರಿ.
ಕರಿಯಬೇವಿನ ಎಸಳುಗಳನು
ಸ್ವಲ್ಪ ಬಾಡಿಸಿ ಬೆರೆಸಿರಿ.
ಎಲ್ಲ ಸೇರಿಸಿ ಪುಡಿಯ ಮಾಡುತ
ತೆಂಗಿನೊಂದಿಗೆ ರುಬ್ಬಿರಿ.
ರುಚಿಯ ಹದವನು ಮನದಿ ಯೋಚಿಸಿ
ಉಪ್ಪುಬೆಲ್ಲವ ಬೆರೆಸಿರಿ.
ತೊಗರಿ ಬೇಳೆಯು ಬೆಂದನಂತರ
ಎಲ್ಲ ಸೇರಿಸಿ ಕುದಿಸಿರಿ.
ಹುಣಿಸೆ ಹಣ್ಣನು ಹಿಂಡಿ
ಹಾಕುತ
ಕೈಯನೊಮ್ಮೆ ತೊಳೆಯಿರಿ.
ಇಂಗು,ಸಾಸಿವೆ ತುಪ್ಪದೊಂದಿಗೆ
ಒಗ್ಗರಣೆಯನು ಹಾಕಿರಿ.
ಕೊತ್ತಂಬ್ರಿಸೊಪ್ಪ ತರಿದು
ಉದುರಿಸಿ
ತಟ್ಟೆಯೊಂದನು ಮುಚ್ಚಿರಿ
ಪಾಕಪುಸ್ತಕ ಓದಿ ಮಾಡಿದ
ತಿಳಿಯ ಸಾರಿದು ಎಚ್ಚರ!
ಅನ್ನದೊಂದಿಗೆ ಬೆರೆಸಿ
ತಿನ್ನಿರಿ
ಹಸಿದ ಹೊಟ್ಟೆಗೆ ರುಚಿಕರ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ