ಟೊಳ್ಳು
ಹೊಟ್ಟೆಯು ಗಟ್ಟಿರೊಟ್ಟಿಯ
ರುಬ್ಬಿ
ರಸವನು ತೆಗೆವುದು.
ಡೊಳ್ಳು
ಹೊಟ್ಟೆಯು ರುಬ್ಬಲಾಗದೆ
ವಾಯು
ಅಬ್ಬರ ಮೆರೆವುದು.
ಟೊಳ್ಳು
ಹೊಟ್ಟೆಯ ಹೊತ್ತ ಬಡವನು
ಬೆವರು
ಸುರಿಸಿ ದುಡಿವನು.
ಡೊಳ್ಳು
ಹೊಟ್ಟೆಯ ಹೊತ್ತ ಧನಿಕನು
ಬೆವರ
ಸುರಿಸದೆ ದಣಿವನು.
ಟೊಳ್ಳ
ಬೆಂಬಲ ಇಲ್ಲದಿದ್ದರೆ
ಡೊಳ್ಳ
ರಾಜ್ಯವನಾಳ್ವನೇ!?
ಪೊಳ್ಳು
ಭರವಸೆ ಪಡೆದ ಟೊಳ್ಳನು
ಜೊಳ್ಳು
ಧಾನ್ಯವ ಬೆಳೆವನೇ!?
ಮೈಯ ಬೆವರಿಸಿ
ಧಾನ್ಯವೊಕ್ಕಿದ
ರಟ್ಟೆಗೆಲ್ಲಿದೆ
ನ್ಯಾಯವು?
ಡೊಳ್ಳು
ತಕ್ಕಡಿ ಎಲ್ಲ ತೂಗಲು
ಟೊಳ್ಳಗೆಲ್ಲಿದೆ
ತೂಕವು?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ