ಬಾರೆ ನೀ ಬೇಗ ಬಾ ಚಲುವೆ ನಾನಿರುವ ಕೋಣೆಯೊಳಗೆ.
ಯಾರಿರದ ವೇಳೆಯಿದು ಬಲಗಾಲ ಒಳಗಿಟ್ಟು ಬಾರೆ.
ನಾಚಿಕೆಯೆ ಒಳಬರಲು!
ಬೆವರುತಿಹೆ! ಹೆದರಿಕೆಯೆ ಒಡಲಿನೊಳಗೆ!?
ಪ್ರೀತಿಯಲಿ ಉಲಿಯವಳು
ನನ್ನವಳು ಬಂದು ನೀನೆನ್ನ ಸವತಿಯಾಗೆ!
ನಡುಹಿಡಿದು ಮೈದಡವಿ ಮುದ್ದಿಸುವೆ ನಿನ್ನನ್ನು
ನೀಡೆನಗೆ ರಸನಿಮಿಷವ.
ಹಿಡಿದುಸಿರು ಹೊರಬಿಟ್ಟು ಓಡಿಸುವೆ ಬೇಗ
ನನ್ನುರದ ನೋವ.
ಆ ದಿನದಿ ನೀ ಬರಲು ನಾ ಕರೆಯಲಿಲ್ಲ.
ನನ್ನವಳ ಪ್ರೀತಿಯಲಿ ಮರೆತಿದ್ದೆ ನಿನ್ನಂದ ಕ್ಷಮಿಸು ಎಲ್ಲ.
ನೀನಿಂದು ನುಡಿವ ಮಾತುಗಳನಾಲಿಸಲು
ಕಾದಿರಲು ಮಂದಿ ಎಲ್ಲ.... ಹಿಡಿದಿರುವೆ ನಾ ನಿನ್ನ ಗಲ್ಲ.
ಬಾ ಚಲುವೆ ಬಳಿ ಬಾರೆ ಬೇಗ ನೀನೆನ್ನ ಭಾವವದನ!
ನನ್ನವಳ ಸವತಿ! ನನಗಿಂದು ಗೆಳತಿ! ನೀನೆನ್ನ ಹೃದಯಕವನ!
double meaning bhatre
ಪ್ರತ್ಯುತ್ತರಅಳಿಸಿಬರಲಿ ಬರಲಿ
ಪ್ರತ್ಯುತ್ತರಅಳಿಸಿಭಟ್ಟರೇ ಆದರೂ
ಅದೇಕೋ ಸಂಶಯ, ಮನದೊಡತಿ ಬಳಿಯಿದ್ದರೆ ಈ ಸವತಿ ಬಾರಳೇ ಎಂದು
ಚೆಂದದ ಕವನ
ಶ್ರವಣ್ ಕುಮಾರ್ ಮತ್ತು ಗೋಪಿನಾಥ್ ರವರಿಗೆ ಧನ್ಯವಾದಗಳು
ಪ್ರತ್ಯುತ್ತರಅಳಿಸಿ