ಬಡತನದ ಮಣ್ಣಿನಲಿ ಕಣ್ಣೀರ ಮಳೆಗರೆದು
ಪುಟವಾಗಿ ನಾ ಬೆಳೆದೆ ಪ್ರೀತಿಕಣವ.
ಸಡಗರದ ಸುಗ್ಗಿಯಲಿ ನನ್ನವಳು ಬೆರೆತಿರಲು
ಹಾಡುವೆನು, ಕುಣಿಯುವೆನು, ತುಂಬಿ ಭಾವ.
ಬಡತನದ ಪಾತ್ರೆಯದು ಬಂಗಾರದದಿರಿನದು
ಸಡಗರದಿ ಬೇಯುವುದು ಪ್ರೀತಿಯಡುಗೆ.
ಬಡಿಸಿಹಳು ನನ್ನವಳು ಬೆಂದಿರುವ ಹೃದಯವನು,
ಅಡುಗೆಯದು ಬಂಗಾರ, ಪ್ರೀತಿ ಕೊಡುಗೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ