ವರುಷ
ಚಕ್ರದ ಮೊದಲ ಹಬ್ಬಕೆ
ಬೇವು-ಬೆಲ್ಲದ
ಸವಿಯಿದೆ.
ಬಾಳಪಯಣದಿ
ಕಷ್ಟಸುಖಗಳು
ಚಕ್ರರೂಪದಿ
ಹೊರಳಿವೆ.
ಚೈತ್ರ
ವಧುವಿನ ಮುಡಿಯನೇರಲು
ಕಾಡು
ಮಲ್ಲಿಗೆ ಅರಳಿದೆ.
ಪ್ರಕೃತಿ
ಮಾತೆಯ ಬಸಿರ ಬಯಕೆಗೆ
ಹುಳಿಯ
ಮಾವಿನ ಮಿಡಿಯಿದೆ.
ಯುಗವು
ಉರುಳುತ ಋತುವು ಮರಳಿದೆ
ಕೃತಿಕೃತಿಯಲೂ
ಸೊಬಗಿದೆ.
ನಿತ್ಯನೂತನಕಾಲಸ್ಪರ್ಶದಿ
ವರುಷ
ಹೊಸತನ ಕಂಡಿದೆ.
ಮೊದಲ
ಹಬ್ಬವು ಅರಿವು ನೀಡಿದೆ
ಭಾವಕುಸುಮವು
ಅರಳಿದೆ.
ಕಾವ್ಯ
ಕಿರಣದ ಅರುಣರಾಗವು
ಹೃದಯ
ಬಾನಲಿ ಹರಡಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ