ಸೋಮವಾರ, ಏಪ್ರಿಲ್ 22, 2013

ಗಡಿ ಕಾವಲು!ತೃಪ್ತವಾಗದ ಆಸೆ ಸುಪ್ತಮನಸಲಿ ಹುದುಗಿ
ದುಃಖರೂಪದಲೆಮ್ಮ ಕಾಡುತಿಹುದು.
ವಸ್ತುವಿಷಯದ ಚಿತ್ರ ಅಚ್ಚಳಿಯದಿರಲಲ್ಲಿ
ತಪ್ತವಾಗಿಹ ಮನಸು ನಲುಗುತಿಹುದು.

ಆಸೆಗಳ ಚಿತ್ರವನು ಕಣ್ಮುಚ್ಚಿ ದಿಟ್ಟಿಸುತ
ನಿಟ್ಟುಸಿರಲದನೊಮ್ಮೆ ಅಳಿಸಬೇಕು.
ಸನ್ನೆ ಕೋಲಲಿ ಕಲ್ಲ ದಬ್ಬುವಂತೆಯೆ ನಾವು
ಉಸಿರಿನಲೆ ಆಸೆಯನು ದಬ್ಬಬೇಕು.

ಅನಗತ್ಯ ಆಸೆಗಳು ಮನದೊಳಗೆ ಬರದಂತೆ
ಅನುಕ್ಷಣವು ಗಡಿಯನ್ನು ಕಾಯಬೇಕು.
ಪರರ ಸೊತ್ತನು ಬಯಸಿ ನುಸುಳಿರುವ ಆಸೆಯನು
ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು.

2 ಕಾಮೆಂಟ್‌ಗಳು:

  1. ನಿಮ್ಮ ಕವಿತೆಗಳಲ್ಲಿ ಸಹಜವಾಗಿರುವ ಲಯ ಕವಿತೆಯನ್ನು ಓದಿಸಿಕೊಂಡು ಹೋಗುತ್ತಿದೆ.. ಚೆನ್ನಾಗಿದೆ :-)

    ಪ್ರತ್ಯುತ್ತರಅಳಿಸಿ
  2. Prashati ರವರೇ... ನಿಮ್ಮ ಪ್ರೋತ್ಸಾಹಕ್ಕೆ ಕೃತಜ್ಞತೆಗಳು

    ಪ್ರತ್ಯುತ್ತರಅಳಿಸಿ