ಗುರುವಾರ, ಏಪ್ರಿಲ್ 18, 2013

ಅಸ್ತಂಗತನಾದ ಚಂದ್ರ!



ಬೆಳ್ದಿಂಗಳ ಬಾನ್ ಮಂಚಕೆ
ಕೊಂಡೊಯ್ದಿದೆ ಕನಸು
ಮಧುಚಂದ್ರದ ಹೊಸಹರುಷದಿ
ತೇಲಾಡಿದೆ ಮನಸು.

ಕಣ್ ನೋಟದ ಮೃದುಸ್ಪರ್ಶಕೆ
ಹೂವಾಗಿದೆ ಮನವು.
ಚೆಲ್ಲಾಟದ ಮುಖಕರ್ಷಕೆ
ಜೇನ್ತುಂಬಿದೆ ತುಟಿಯು.

ತುಟಿಯಂಚಿನ ರಸಗವಳಕೆ
ಕಾವೇರಿದೆ ತನುವು.
ಪ್ರತಿನಿಮಿಷಕೆ ಸವಿಯೂಡಿದೆ
ಶೃಂಗಾರದ ರಸವು.

ಮಧುಚಂದ್ರದ ರಸಘಳಿಗೆಗೆ
ಉಳಿದಿರಲರೆ ಕ್ಷಣವು.
ಗಿರಿಯಂಚಲಿ ಬಾನ್ ಮಂಚದ
ಕಾಲ್ಕಳಚಿದ ಅರಿವು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ