ಹಗಲಿರುಳಿನ
ಸಮ್ಮಿಲನಕೆ
ಕೆಂಪಾಗಿದೆ
ಮುಗಿಲು.
ಇಳಿಸೂರ್ಯನ
ಮೃದುನೋಟಕೆ
ತಂಪಾಗಿದೆ
ಹಗಲು.
ತಂಪೆರೆಯುವ
ಹಾಲಿರುಳಿಗೆ
ಹಗಲೆಲ್ಲಿದೆ
ಸನಿಹ?
ಬಿರುಬಿಸಿಲಿನ
ನಡುಹಗಲಿಗೆ
ಇರುಳಿಲ್ಲದ
ವಿರಹ.
ಸುಡುಹಗಲಿನ
ಕಾವಿಳಿಸಲು
ಕಡಲೊಳು
ರವಿ ಮುಳುಗಿ.
ನಡುಯಿರುಳಿನ
ಕರಿಯಿಳಿಯಲು
ಎದ್ದನು
ಜಗ ಬೆಳಗಿ.
ಇರುಳಂಚಿನ
ಮೃದುಸ್ಟರ್ಶಕೆ
ಕಾದಿರೆ
ಎಳೆ ಹಗಲು.
ಹಗಲಿರುಳಿನ
ಬಿರುಬೆಸುಗೆಗೆ
ಕಾದಿದೆ
ಜಗದೊಡಲು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ