ಒಣಗಿರುವ
ನಿನ್ನೆದೆಯ ಕುಟುಕುಟುಕಿ ಪಸೆಯೆಳೆದು
ಚಣಚಣವು
ಒಲವನ್ನು ಗುಟುಕರಿಸಲೆ!?
ಒಣಮರವ
ಕುಟುಕುಟುಕಿ ಹನಿಜಲವ ಹೊರಗೆಳೆದು
ಗುಟುಕರಿಪ
ಮರಕುಟಕ ಹಕ್ಕಿಯಂತೆ.
ನಿನ್ನೊಲವ
ಜಲಹನಿಯ ಕುಡಿದೊಡಲ ತಂಪೆರೆದು
ಒಲವಿನಾ
ಹೆಮ್ಮರವ ನಾ ಬೆಳೆಯಲೆ!?
ನೆಲದೊಳಗೆ
ಹುದುಗಿರುವ ಜೀವಜಲ ಪಸೆಯೆಳೆದು
ಮರವು
ಬುಡದಲಿ ಮತ್ತೆ ಚಿಗುರಿದಂತೆ.
ಬಡತನದಿ
ಬೆಂದಿರುವ ನಿನ್ನೆದೆಯ ಒಲವೆನಗೆ
ಹೃದಯದೊಳು
ತಂಪೆರವ ತರುವಿನಂತೆ.
ಸುಡುವ
ಬೆಂಕಿಯ ಹೊತ್ತ ಒಣಮರದ ಜಲವೆಲ್ಲ
ಒಲವಾಗಿ
ಬಂದಂತೆ ಮರಕುಟಕಕೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ