ಮನಸು
ಚಲಿಸಲು ಗಿರಿಜೆ
ಮನಸು
ನಿಲ್ಲಲು ಶಿವವು
ಶಿವಗಿರಿಜೆಯೆರಡೊಂದೆ
ಬೇಧವಿಲ್ಲ.
ಮೌನಶಿವ
ನೋಡುವನು
ಮನದ ಪರದೆಯ
ಮೇಲೆ
ತನ್ನಾತ್ಮಗಿರಿಜೆಯನು-
ನಾಟ್ಯ ಎಲ್ಲ.
ಚಲನೆಯದು
ವಿಸ್ತರಿಸಿ
ಸೃಷ್ಟಿಯಾಗಿದೆ
ಜಗದಿ
ಚಲನರಹಿತನ
ಮನದ ಪರದೆಯಲ್ಲಿ.
ತನ್ನ
ಚಲನೆಯ ತಾನೆ
ಮನದ ಅಲೆಯಲಿ
ಕಂಡು
ಶಿವನು
ಕುಳಿತಿಹ ಮೌನಶರಧಿಯಲ್ಲಿ
ಚಲನೆಯಾಡಿದ ನಾಟ್ಯ
ಗಿರಿಜೆಯೆಂಬುದೆ
ದಿಟವು
ಮನದ ಸೃಷ್ಟಿಯ
ಬಣ್ಣ ವೈವಿಧ್ಯವು.
ಚಲನರಹಿತವೆ ಮೌನ
ಶಿವನೆಂಬ
ಸ್ಥಿರತತ್ತ್ವ
ನಿಂತು
ನೋಡಲು ಅಲ್ಲೆ- ಸಾನ್ನಿಧ್ಯವು.
ಸುಂದರ ಸಾಲುಗಳು. "ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ.." ನೆನಪಿಸುತ್ತವೆ..
ಪ್ರತ್ಯುತ್ತರಅಳಿಸಿಸುಂದರ ಸಾಲುಗಳು.
ಪ್ರತ್ಯುತ್ತರಅಳಿಸಿadhbhuta bhavaneyulla nice poem
ರಾಘವೇಂದ್ರ ಹಾಗೂ ಶಾರದರವರೇ....ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಕೃತಜ್ಞತೆಗಳು.
ಪ್ರತ್ಯುತ್ತರಅಳಿಸಿ