ರಾಮದೇವರ
ತೇರನೆಳೆಯಲು
ನಮಗೆ
ಏತಕೆ ಅವಸರ?
ರಾಮರಾಜ್ಯವ
ಕಟ್ಟಿ ಬೆಳೆಸಲು
ಮನದಿ
ಮೂಡಲಿ ಸಡಗರ.
ಹೃದಯರಥವನು
ರಾಮನೇರಲಿ
ಚಿತ್ತಭೂಮಿಯ
ಸುತ್ತಲಿ.
ಆತ್ಮಸಾಕ್ಷಿಯ
ಸಂವಿಧಾನವ
ಪಂಚಕರಣಕೆ
ವಿಧಿಸಲಿ.
ನಿತ್ಯಪ್ರಾಣಾಯಾಮಬಂಧದಿ
ಮುಖ್ಯಪ್ರಾಣನು
ಉದಿಸಲಿ.
ಕಾಮಮೋಹವು
ಶೂನ್ಯವಾಗಲು
ರಾಮಧಾರಣವಾಗಲಿ.
ಸಾಮಭಕ್ತಿಯ
ರಾಮರಸವನು
ಜನಗಣಮನವು
ಕುಡಿಯಲಿ.
ನಿತ್ಯಮುಕ್ತಿಯ
ಸಹಜಯೋಗದ
ಸತ್ಯಪಥದಲಿ
ಚಲಿಸಲಿ.
ರಾಮ ರಾಜ್ಯದ ಕನಸಿನ ಸಾಕಾರವನ್ನು ಸಾಕ್ಷಾತ್ಕಾರಗೊಳಿಸಲು ಬರೆದ ನಿಮ್ಮ ಕವನ ರಾಮರಸಾಮೃತವನ್ನು ಉಣಬಡಿಸಿ ಜೀವನದ ನಿಜ ಆದರ್ಶವನ್ನು ಎತ್ತಿ ತೋರಿಸುತ್ತಿದೆ. ಮೆಚ್ಚುಗೆಗೆ ಪಾತ್ರವಾದ ಕವಿತೆ.
ಪ್ರತ್ಯುತ್ತರಅಳಿಸಿಬದರಿನಾರಾಯಣರವರೇ....ನಿಮ್ಮ ಮೆಚ್ಚುಗೆಯ ನುಡಿಗೆ ಸಂತಸದ ಕುಡಿಯೊಡೆದಿದೆ. ಧನ್ಯವಾದಗಳು
ಪ್ರತ್ಯುತ್ತರಅಳಿಸಿ