ಓಡುತಿಹೆ
ವೇಗದಲಿ ಗೊತ್ತುಗುರಿಯಿಲ್ಲದೆಯೆ
ಏನನ್ನು
ತರಬೇಕು?- ಕೇಳು ಮನವೆ.
ನಿನ್ನ
ವೇಗದ ಗತಿಗೆ ಮಿತಿಹಾಕಿ ಬಾ ಬಳಿಗೆ
ಇರಬಹುದು
ನನ್ನೊಳಗೆ ತರುವ ವಸ್ತು.
ಇಂಧನವ
ಹಾಕಿದೊಡೆ ಓಡಬಾರದು ಹಾಗೆ
ಗುರಿಯನ್ನು
ಅರಿಯುತ್ತ ನಡೆಯಬೇಕು.
“ಕುಟ್ಟಿ
ಕುಂದಾಪುರಕೆ ಹೋದಂತೆ ಹೋಗದಿರು”
“ಏನನ್ನು
ತರಬೇಕು?”- ತಿಳಿದು ಹೋಗು.
ನಾನು
ಹೇಳುವ ವಸ್ತು ತರಬೇಡ ಅವಸರದಿ
“ನಿನಗೇಕೆ
ಅದುಬೇಕು?” ಕೇಳು ಒಮ್ಮೆ.
ಕುಳಿತೊಮ್ಮೆ
ಮಾತಾಡಿ ಹೋಗಿ ಬಾ ನಡೆಯುತ್ತ
ನೋಡುವೆನು
ಎಲೆ ಮನವೆ! ನಿನ್ನ ನಡೆಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ