ದುಡ್ಡಿನಾ
ಬೆಂಬತ್ತಿ ಗುಡ್ಡೆಮಾಡುವ ಮಂದಿ
ಹೆತ್ತ
ಕರುಳನು ಬಿಡದೆ ಚುಚ್ಚುತಿಹರು.
ಚುಚ್ಚಿದಾ
ರಭಸಕ್ಕೆ ಹೊರಬಂದ ದುಡ್ಡಿನಲಿ
ಹುಟ್ಟುಹಬ್ಬಕೆ
ಹಣತೆ ಹಚ್ಚುತಿಹರು.
ಹೆತ್ತವರ
ಕತ್ತಿನಲಿ ಹರಳೊಂದು ಹೊಳೆದಿರಲು
ಸತ್ತಾಗ
ಬೆಂಬತ್ತಿ ಸೆಳೆಯುತಿಹರು.
ಸತ್ತ
ದೇಹದ ಆತ್ಮ ಕಾಡದಿರಲೆಮಗೆಂದು
ಶ್ರದ್ಧೆಯಲಿ
ತಿಥಿಯೂಟ ಸವಿಯುತಿಹರು.
ಗುಡ್ಡೆ
ಹಾಕಿದ ದುಡ್ಡು ಬಾರಲಾರದು ಹಿಂದೆ
ಕೃತಕರ್ಮಫಲವೆಲ್ಲ
ಬರದೆ ಬಿಡದು.
ಮೈಯ ಬೆವರಲಿ
ದುಡಿದ ದುಡ್ಡೆಮ್ಮ ಕಾಯುವುದು
ಹೆತ್ತ ಕರುಳಿನ ನೆರಳು ನಮಗೆ ಇರಲು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ